ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಪ್ರಯಾಣ ಬೆಳೆಸುತ್ತಿರುವುದು ಗೊತ್ತಾಗುತ್ತಿದ್ದಂತೆ ವಿಧಾನ ಪರಿಷತ್ ನಾಮನಿರ್ದೇಶನ ಬಯಸಿರುವ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಅವರ ಮನೆಗೆ ಪ. ದೂರವಿದ್ದವರು ದೂರವಾಣಿ ಕರೆ ಮಾಡಿ ನೆನೆಪಿಸಿದರು.ಪ್ರಮುಖವಾಗಿ ಚಿತ್ರನಟ ಸಾದು ಕೋಕಿಲ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕಾಣಿಸಿಕೊಂಡರು. ಮಾಜಿ ಸದಸ್ಯ ಆಯನೂರು ಮಂಜುನಾಥ್ ಕಾರ್ಯನಿಮಿತ್ತ ಕೃಷ್ಣಾಕ್ಕೆ ಆಗಮಿಸಿದ್ದರು.ಆಸಕ್ತರು:ಹಿರಿಯ ನಾಯಕಿ ಮಾಜಿ ಸಚಿವೆ ರಾಣಿ ಸತೀಶ್, ಮುಖ್ಯಮಂತ್ರಿ ಆಪ್ತ ಸ್ನೇಹಿತ ರವಿಚಂದ್ರನ್ , ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೇಶ ಬಾಬು, ವಿ.ಎಸ್.ಉಗ್ರಪ್ಪ ನಟ ಸಾದು ಕೋಕಿಲ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಂಜುಳಾ ನಾಯ್ಡು, ಕೋಲಾರದ ಕೃಷ್ಣ, ತುಮಕೂರಿನ ಆರ್.