ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ನವೆಂಬರ್ 06) ಹಾಸನಾಂಬೆಯ ದರ್ಶನ ಪಡೆದುಕೊಂಡರು. ಆದ್ರೆ, ಅಮ್ಮನ ದರ್ಶನ ಪಡೆಯಲು ಮಾಜಿ ಸಿದ್ದರಾಮಯ್ಯ ಅರ್ಧ ಗಂಟೆ ಸುತ್ತಾಡಿ ಬರಬೇಕಾಯ್ತು. ಹೌದು... ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ವೇಳೆ ಗೊಂದಲ ಉಂಟಾಗಿದ್ದು, ಡಿಸಿ, ಎಸ್ಪಿ ಮತ್ತೊಂದು ಇನೋವಾ ಕಾರು ಬರುತ್ತಿದ್ದಂತೆ ಗೇಟ್ ಬಂದ್ ಮಾಡಲಾಗಿದೆ. ಹೀಗಾಗಿ ಗೇಟ್ ಬಂದ್ ಆಗಿದೆ ಎಂದು ತಿಳಿದು ಸಿದ್ದರಾಮಯ್ಯನವರ ಕಾರು ದೇವಸ್ಥಾನದಿಂದ ಮುಂದೆ ಹೋಗಿದೆ. ಇದರಿಂದ ರಸ್ತೆ ತಪ್ಪಿದ್ದು, ಟ್ರಾಫಿಕ್ನಲ್ಲಿ ಸಿಲುಕಿದರು.