ನವದೆಹಲಿ: ತಮ್ಮ ವಿರುದ್ಧ ಮರಣದಂಡನೆ ತೀರ್ಪು ಹೊರಬಿದ್ದು, ಜೀವಕ್ಕೆ ಅಪಾಯವಿದ್ದರೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ತಾಯ್ನಾಡಿಗೆ ಮರಳುವ ನಿರ್ಧಾರದಿಂದ ಹಿಂದೆ ಸರಿದಿಲ್ಲ. "ನನ್ನ. "ನನ್ನ ಸ್ವಂತ ದೇಶಕ್ಕೆ ಮರಳಲು ನನಗೆ ಯಾವುದೇ ವಿದೇಶಿ ಶಕ್ತಿಯ ಅಗತ್ಯವಿಲ್ಲ. ಸಾವು ನನ್ನ ಹಣೆಯಲ್ಲೇ ಬರೆದಿದ್ದರೆ, ನನ್ನ ಜನರ ನಡುವೆ, ನನ್ನ ದೇಶದ ಮಣ್ಣಿನಲ್ಲೇ ಸಾಯಲು ನಾನು ಬಯಸುತ್ತೇನೆ," ಎಂದು ಹೇಳುವ ಮೂಲಕ ಹಸೀನಾ ಬಾಂಗ್ಲಾ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಮೂಡಿಸಿದ್ದಾರೆ.ಅಮೆರಿಕದ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಿಂದ ಬಾಂಗ್ಲಾದೇಶಕ್ಕೆ ಮರಳುವ ತಮ್ಮ ಯೋಜನೆಯಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲ ಎಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ..ವಿದೇಶಿ ಬೆಂಬಲದ ಹಂಗಿಲ್ಲ!