ಪತ್ನಿ ಸೇರಿದಂತೆ 7 ಮಂದಿಯನ್ನು ಕೊಲೆ ಮಾಡಿದ ಕ್ಯಾಬ್ ಚಾಲಕ .ಪತ್ನಿ ಕುಟುಂಬಸ್ಥರನ್ನು ಕೊಂದು ಚಿಕ್ಕಬಳ್ಳಾಪುರದಲ್ಲಿ ಶವ ಬಿಸಾಡಿದ್ದ ಆರೋಪಿ ಅರೆಸ್ಟ್.ಕ್ಯಾಬ್ ಚಾಲಕ ಶೇಖರ್ ಅಲಿಯಾಸ್ ಇಂದುಶೇಖ. ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು. ಚಿಕ್ಕಬಳ್ಳಾಪುರದಲ್ಲಿ ಶವ ವಿಲೇವಾರಿರಾಜಾಜಿನಗರದ ಭಾಷ್ಯಂ ವೃತ್ತದ ಬಳಿಯ ತನ್ನ ಮನೆಯಲ್ಲಿಯೇ ಎರಡು ದಿನಗಳ ಕಾಲ ಈ ಕೃತ್ಯ ಎಸಗಿರುವ ಆರೋಪಿ, ಬಳಿಕ ಕೆಲ ಶವಗಳನ್ನು ಚಿಕ್ಕಬಳ್ಳಾಪುರ ಸಮೀಪದ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾನೆ. ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ..