ಮುಂಬೈ: ಟೀಮ್ ಇಂಡಿಯಾ ಸ್ಟಾರ್ ಬೌಲರ್ ಯುಜ್ವೇಂದ್ರ ಚಾಹಲ್ ಅವರ ವೈಯಕ್ತಿಕ ಜೀವನದ ಕುರಿತಾದ ಶಾಕಿಂಗ್ ಸುದ್ದಿಯೊಂದು ಸದ್ಯ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಾಹಲ್ ಅ. ಚಾಹಲ್ ಅವರ ಆಪ್ತ ಸ್ನೇಹಿತೆ, ಖ್ಯಾತ ಆರ್ಜೆ ಮಹ್ವಾಶ್ ಅವರ ಹಳೆಯ ಪಾಡ್ಕಾಸ್ಟ್ ಸಂದರ್ಶನದ ಸಣ್ಣ ವಿಡಿಯೋ ತುಣುಕೊಂದು ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. "ಗರ್ಭಿಣಿಯಾಗಿದ್ದ ಪತ್ನಿಗೆ ಆತ ಮೋಸ ಮಾಡಿದ್ದ, ಒಮ್ಮೆ ಮೋಸಗಾರನಾದವನು ಎಂದಿಗೂ ಮೋಸಗಾರನೇ" ಎಂದು ಮಹ್ವಶ್ ಹೇಳಿರುವ ವಿಡಿಯೋವನ್ನು ಕೆಲವರು ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಲಿಂಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ. ಆದರೆ, ಈ ವೈರಲ್ ವಿಡಿಯೋದ ಅಸಲಿ ಕಥೆಯೇ ಬೇರೆಯೇ ಆಗಿದೆ.