ಕಲಬುರಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬೆಳೆ ರಕ್ಷಣೆ, ಕುಡಿವ ನೀರು ಹಾಗೂ ಜಾನುವಾರುಗಳ ನೀರಿನ ಅಗತ್ಯ ಗಮನದಲ್ಲಿಟ್ಟುಕೊಂಡು ಜೇವರ್ಗಿ ಶಾಖಾ ಕಾಲುವೆ, ಇಂಡಿ ಹಾಗೂ ಮುಡಬೂಳ ಶಾಖ. ಹೀಗಾಗಿ ಜೆಬಿಸಿಯ ವಡಗೇರಾದಿಂದ ಸುಂಬಡದವರೆಗೆ 880 ಕ್ಯೂಸೆಕ್ ನೀರು ಹರಿಸಿ ಟೇಲ್ಎಂಡ್ ರೈತರಿಗೂ ನೀರು ತಲುಪಿಸುವ ಅಗತ್ಯವಿದೆ ಎಂದು ತಿಳಿಸಿದರು.ಡಿಸ್ಟ್ರಿಬ್ಯೂಟರ್ 18 ರಿಂದ 26ರವರೆಗೆ ಜೇವರ್ಗಿ ವ್ಯಾಪ್ತಿ ಬರುವ ಎಂಬಿಸಿ ಕಾಲುವೆಗೆ 450 ಕ್ಯೂಸೆಕ್ ಒಳ ಹರಿವು ಇರಬೇಕಾದ ಜಾಗದಲ್ಲಿ ಕೇವಲ 200 ಕ್ಯೂಸೆಕ್ ಒಳಹರಿವು ಇರುವುದರಿಂದ ಇಲ್ಲಿಯೂ ಟೇಲ್ಎಂಡ್ನಲ್ಲಿರುವ ಮದರಿ, ಕಟ್ಟಿಸಂಗಾವಿ, ಗುಡೂರ್ ಎಸ್.ಎ., ರಾಜವಾಳ, ಬಿರಾಳ್ ಗ್ರಾಮಗಳಿಗೆ ನೀರು ಬರುತ್ತಿಲ್ಲ ಎಂದು ವಿವರಿಸಿದರು.