ಹೋಟೆಲ್ನಲ್ಲಿರುವ ಹೇರ್ ಡ್ರೈಯರ್, ದಿಂಬುಗಳು ಕರ್ಟನ್ಗಳು, ದೀಪಗಳು ನೋಡಲು ಆಕರ್ಷಕವಾಗಿರುತ್ತವೆ. ಹಾಗಂತ ಇದನ್ನೆಲ್ಲಾ ಕದ್ದು ಮುಚ್ಚಿ ಮನೆಗೆ ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ಸಿಕ್ಕಿ ಬಿದ್ದರೆ ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ದಂಡ ವಿಧಿಸಲಾಗುತ್ತದೆ. ಆದರೆ ವೈಯುಕ್ತಿಕ ಕಿಟ್ ಗಳು, ಶ್ಯಾಂಪೂ, ಕಂಡೀಷನರ್, ಸೋಪ್, ಚಹಾ ಹಾಗೂ ಕಾಫಿ ಸಾಮಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ. ಕೆಲವರಿಗೆ ಕಂಡದೆಲ್ಲಾ ಬೇಕು, ಬಾಯಿ ಬಿಟ್ಟೆ ಕೇಳುತ್ತಾರೆ. ಇನ್ನು, ಕೆಲವರು ಹೋಟೆಲ್ ಗಳಲ್ಲಿ ರೂಮ್ ಮಾಡಿದಾಗ ಅಲ್ಲಿದ್ದ ವಸ್ತುಗಳನ್ನು ಹೇಳದೇನೇ ತೆಗೆದುಕೊಂಡು ಹೋಗ್ತಾರೆ. ಆದರೆ ಹೋಟೆಲ್ ರೂಮ್ಗಳಲ್ಲಿರುವ (Hotel room) ಈ ವಸ್ತುಗಳನ್ನು ಆರಾಮಾಗಿ ತೆಗೆದು ಕೊಂಡು ಹೋಗಲು ಅವಕಾಶವಿದೆ.