ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಎಲ್ಲಿಂದಲೋ ಹಾರಿ ಬಂದ ಟೈರ್ ಡಿಕ್ಕಿ ಹೊಡೆದ ಭಯಾನಕ ಘಟನೆ ವಿಡಿಯೋ ವೈರಲ್ ಆಗಿದೆ. ಚಿಲಿ, ನವೆಂಬರ್ 06:ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಮೇಲೆ ನಮ್ಮ ಗಮನ ಇರುತ್ತದೆ. ಆದರೆ ಕೆಲವೊಮ್ಮೆ ನಾವು ಊಹಿಸದ ಕಡೆಯಿಂದಲೂ ಅಪಾಯ ಎದುರಾಗಬಹುದು. ಚಿಲಿಯ ಸ್ಯಾಂಟಿಯಾಗೊದಲ್ಲಿ ಇಂತಹದ್ದೇ ವಿಚಿತ್ರ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 19 ವರ್ಷದ ಯುವಕನಿಗೆ ಏಕಾಏಕಿ ಹಾರಿಬಂದ ಟೈರ್ ಡಿಕ್ಕಿ ಹೊಡೆದಿದೆ. ಟೈರ್ ಬಡಿದ ರಭಸಕ್ಕೆ ಯುವಕ ನೆಲಕ್ಕೆ ಬಿದ್ದಿದ್ದಾನೆ. ಈ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.