ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರಲು ಇರಾನ್ ವಿಫಲ ಪ್ರಯತ್ನ ನಡೆಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕದ ಮಧ್ಯಂತರ ಚುನಾವಣೆ ಮುಗಿದ ಬಳಿಕ ಇರಾನ್ ವಿರುದ್ಧದ ಯುದ್ಧ ತಕ್ಷಣವೇ ಅಂತ್ಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಬಳಿಕ ಯುದ್ಧ ಕೊನೆಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.“ಚುನಾವಣೆ ಬಳಿಕ ಯುದ್ಧ ತಕ್ಷಣವೇ ಅಂತ್ಯಗೊಳ್ಳಲಿದೆ” ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಇರಾನ್ ಇನ್ನು ಹೆಚ್ಚು ಕಾಲ ಹೋರಾಟ ಮುಂದುವರಿಸಲು ಸಾಧ್ಯವಿಲ್ಲ. ಇರಾನ್ನ ಭಯೋತ್ಪಾದಕ ಆಡಳಿತವನ್ನು ಕೆಳಗಿಳಿಸುವುದೇ ಪ್ರಮುಖ ಗುರಿಯಾಗಿದ್ದು, ಅದಕ್ಕೆ ತಾವು ಬಹಳ ಹತ್ತಿರದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.