ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಭಾರಿ ಹಿನ್ನಡೆಗೆ ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಗಾಲಿಬಾಫ್ ಅಮೆರಿಕದ ಉಪಾಧ್ಯಕ್ಷ ಹಾಗೂ ಟ್ರಂಪ್ ಆಡಳಿತವನ್ನು ವ್ಯಂಗ್ಯ ಮಾಡಿದ್ದಾರೆ. ಅಮೆರಿಕದ ನಾಯಕತ್ವವನ್ನು "ಸೋತ ಜೂಜುಕೋರನ ಮಾನಸಿಕತೆ" ಎಂದು ಕರೆದಿರುವ ಗಾಲಿಬಾಫ್, ಟ್ರಂಪ್ ಸರ್ಕಾರ ಸೋಲಿನ ಮೇಲೂ ತಪ್ಪು ನಿರ್ಧಾರಗಳನ್ನು ಮುಂದುವರಿಸುತ್ತಿದೆ ಎಂದು ಟೀಕಿಸಿದ್ದಾರೆ.