ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ ಅವರ ಆಟ ಮೋಸದಿಂದ ಕೂಡಿದೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ಅಲ್ಲದೇ, ವ್ಯಕ್ತಿತ್ವದಲ್ಲೂ ಕಿರಣ್ ಶಾಸ್ತ್ರಿ ಉತ್ತಮ ಎನಿಸಿಕೊಂಡಿಲ್ಲ. ಮಾತಿನ ಮೇಲೆ ಕೂಡ ಅವರಿಗೆ ನಿಗಾ ಇಲ್ಲ. ಗಾನವಿಗೆ ಬಾಡಿ ಶೇಮಿಂಗ್ ಮಾಡುವ ರೀತಿಯಲ್ಲಿ ಕಿರಣ್ ಶಾಸ್ತ್ರಿ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಎಲ್ಲರ ಅಸಲಿ ಮುಖ ಬಯಲಾಗುತ್ತದೆ. ನಾಟಕ ಮಾಡಿಕೊಂಡು ಕೆಲವು ದಿನಗಳು ಮಾತ್ರ ಇರಬಹುದು. ಆದರೆ ಜಾಸ್ತಿ ದಿನ ನಾಟಕ ಮಾಡೋಕೆ ಆಗಲ್ಲ. ಪರಿಸ್ಥಿತಿ ಬದಲಾದಂತೆಲ್ಲ ಸ್ಪರ್ಧಿಗಳ ಮುಖವಾಡ ಕಳಚಿ ಬೀಳುತ್ತದೆ. ಈ ವಾರ ಕಿರಣ್ ಶಾಸ್ತ್ರಿ ಎಲ್ಲರ ಕಣ್ಣಿನಲ್ಲಿ ವಿಲನ್ ಆಗಿದ್ದಾರೆ.