ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಇಂದು ವಿಶ್ವಾದ್ಯಂತ ತೆರೆ ಕಾಣಲಿದೆ. ರಿಲೀಸ್ಗೂ ಮುನ್ನವೇ. ರಿಲೀಸ್ಗೂ ಮುನ್ನವೇ ಸಿನಿಮಾ ಭಾರತೀಯ ಚಿತ್ರರಂಗ ಸೇರಿ ವಿಶ್ವಮಟ್ಟದಲ್ಲಿ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಅಂದಾಜು 10 ಸಾವಿರ ಸೇರಿ ವಿಶ್ವಾದ್ಯಂತ ಅಂದಾಜು 60 ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಭಾರತೀಯ ಸಿನಿಮಾ ಈ ದಾಖಲೆ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು. ಆ ಮೂಲಕ ‘ರಾಮಾಯಣ’ ದೀಪಾವಳಿ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದೆ.