ನಟಿ ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಅವರ 15 ವರ್ಷಗಳ ಪ್ರೇಮಕಥೆ ಮದುವೆ ಆಗಿ ಸುಖಾಂತ್ಯ ಕಂಡಿದೆ. ಅಂತರಧರ್ಮೀಯ ಮದುವೆಯಾದ್ದರಿಂದ ಆರಂಭದಲ್ಲಿ ಮನೆಯಲ್ಲಿ ಎದುರಾಗಿದ್ದ ಕಷ್ಟಗಳನ್ನು ಕೀರ್ತಿ ಬಿಚ್ಚಿಟ್ಟಿದ್ದಾರೆ. ತಾಯಿ ಮೇನಕಾಗೆ ಡೈರಿ ಮೂಲಕ ಪ್ರೀತಿ ವಿಚಾರ ತಿಳಿದಿತ್ತಂತೆ. ಪ್ರೀತಿಯ ಹಾದಿಯ ಆಸಕ್ತಿಕರ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಅವರ ಸುದೀರ್ಘ 15 ವರ್ಷಗಳ ಪ್ರೇಮಕಥೆ ಕೊನೆಗೂ ಸುಖಾಂತ್ಯ ಕಂಡಿದ್ದು ಗೊತ್ತೇ ಇದೆ. ಸುಮಾರು ಒಂದೂವರೆ ದಶಕಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 2024ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.