ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಹಾಗೂ ಧನುಷ್ಗೆ ಮುಖ್ಯದ್ವಾರ ಓಪನ್ ಆಗಿದ್ದು, ಕೇವಲ ಒಂದು ನಿಮಿಷದೊಳಗೆ ತಮ್ಮ ಮನೆಯವರ ಪತ್ರ ಹುಡುಕಿಕೊಂಡು ಬರುವ ರೋಚಕ ಹಾಗೂ ಕಠಿಣ ಸವಾಲನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ನಿಗದಿತ ಸಮಯದಲ್ಲಿ ವಾಪಸ್ ಬರದಿದ್ದರೆ ಬಾಗಿಲು ಮುಚ್ಚಿಕೊಳ್ಳಲಿದೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಗಂಭೀರ ಹಾಗೂ ರೋಚಕವಾದ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ. ಮನೆಯೊಳಗೆ ಸ್ಪರ್ಧಿಗಳಾದ ಸೌಂದರ್ಯಾ ಹಾಗೂ ಧನುಷ್ ಅವರಿಗೆ ಮನೆಯಿಂದ ಪತ್ರಗಳು ಬಂದಿದ್ದು, ಆ ಪತ್ರಗಳನ್ನು ಪಡೆಯಲು ಅವರು ಕಠಿಣ ಸವಾಲನ್ನು ಎದುರಿಸಬೇಕಿದೆ. ಬಿಗ್ ಬಾಸ್ ಸೂಚನೆಯಂತೆ, ಸ್ಪರ್ಧಿಗಳು ತಮ್ಮ ಪತ್ರಗಳನ್ನು ಪಡೆದುಕೊಳ್ಳಲು ಮನೆಯ ಮುಖ್ಯ ದ್ವಾರದ ಮೂಲಕ ಹೊರಹೋಗಬೇಕು.