ಹಾಲು, ಅಕ್ಕಿ, ಬೇಳೆಕಾಳು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಬೆಂಗಳೂರಿನ ಹೋಟೆಲ್ಗಳ ಮೆನು ಮೇಲೂ ಬಿದ್ದಿದೆ. ಹಲವು ಹೋಟೆಲ್ಗಳು ಆಹಾರ ದರವನ್ನು ಶೇ 10ರಿಂದ 15ರಷ್ಟು ಹೆಚ್ಚಿಸಿದ್ದು, ಟೀ-ಕಾಫಿ ದರ 3ರಿಂದ 5 ರೂಪಾಯಿವರೆಗೆ ಏರಿಕೆಯಾಗಿದೆ. ಇನ್ನು ಕೆಲವು ಹೋಟೆಲ್ಗಳು ದರ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಗಳೂರು, ನವೆಂಬರ್ 5: ಹಾಲು, ಅಕ್ಕಿ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮದ ಹೊಡೆತ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೂ ಬಿದ್ದಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಕಾರಣ ನಗರದ ಹಲವು ಹೋಟೆಲ್ಗಳು ಮೆನು ದರವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿವೆ.