ಐಪಿಎಲ್ 2027ರ ಟ್ರೇಡ್ ವಿಂಡೋ ಆರಂಭವಾಗುತ್ತಿದ್ದಂತೆ ಇಡೀ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಉಳಿದ 9 ಫ್ರಾಂಚೈಸಿಗಳು ತಮಗೆ ಬೇಕಾದ ಸ್ಟಾರ್ ಆಟಗಾರರನ್ನು ಸೆಳೆದುಕೊಳ್ಳಲು ಕೋಟಿ ಕೋಟಿ ಲೆಕ್ಕಾಚಾರದಲ್ಲಿ ಮುಳುಗಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ. ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಅಲರ್ಟ್ ಆಗಿದೆ. ಆದರೆ ಈ ವಿಷಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಂಗಲ್ ಸಿಂಹ. ಅಂದರೆ ಯಾವುದೇ ಫ್ರಾಂಚೈಸಿ ಜೊತೆ ಆರ್ಸಿಬಿ ತಂಡ ಮಾತ್ರ ಇದುವರೆಗೆ ಟ್ರೇಡಿಂಗ್ಗಾಗಿ ಮಾತುಕತೆ ನಡೆಸಿಲ್ಲ.