ಸುಂಟಿಕೊಪ್ಪ: ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಸುಂಟಿಕೊಪ್ಪಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್ ಹೇಳಿದರು.ಸುಂಟಿಕೊಪ್ಪ ಸ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸ್ಪಷ್ಟ ಪದ ಬಳಕೆಯನ್ನು ಮಾಡುತ್ತಿರುವುದು ಕನ್ನಡ ಉಳಿವಿಗೆ ಸಹಕಾರಿ. ಇಂಗ್ಲಿಷ್ ಮಾಧ್ಯಮವನ್ನು ಭಾಷೆಯಾಗಿ ಬಳಸಿಕೊಂಡು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬೇಕೆ ಹೊರತು, ಕನ್ನಡವನ್ನು ನಿರ್ಲಕ್ಷ್ಯ ಮಾಡುವಂತಾಗಬಾರದು ಎಂದು ಕಿವಿಮಾತು ಹೇಳಿದರು.ಶಿಕ್ಷಕ ಹಾಗೂ ಸಾಹಿತಿ ಸತೀಶ್ ಕಾಜೂರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಹುಟ್ಟು, ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ ಅವರು, ಬ್ರಿಟಿಷರು ತಮ್ಮನ್ನು ಒಡೆದು ಆಳುವ ನೀತಿಯ ಹಿನ್ನೆಲೆಯಲ್ಲಿ ವಿವಿಧ ಭಾಷೆಗಳನ್ನು ಆಡುವ ಜನರನ್ನು ಒಟ್ಟಿಗೆ ಪರಸ್ಪರ ಮಾತನಾಡದಂತೆ ಮಾಡಿದರು.