ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಂಗಳವಾರ ಆರೋಪಿಸಿದ್. ಅಶೋಕ್ ಅವರು ಮಂಗಳವಾರ ಆರೋಪಿಸಿದ್ದು, ಜಿಪಿಎಸ್ ಹಾಗೂ ಡ್ರೋನ್ ಸಮೀಕ್ಷೆಯ ನೆಪದಲ್ಲಿ ಆಸ್ತಿ ಅಳತೆಯಲ್ಲಿ ಎಡವಟ್ಟು ಮಾಡಿ, ಹೆಚ್ಚುವರಿ ತೆರಿಗೆ ಪಾವತಿಸುವಂತೆ ನಾಗರಿಕರಿಗೆ ನೋಟಿಸ್ ನೀಡಲಾಗುತ್ತಿರುವ ಕುರಿತು ಜಿಬಿಎ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಮತ್ತು ನಿತ್ಯ ಕಿರುಕುಳ ನೀಡುವುದೇ?