ಬಾಗಲಕೋಟೆ ಜಿಲ್ಲೆಯಲ್ಲಿ ಸ್ಟಿಂಗ್ ಮತ್ತು ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿಜಯಾನಂದ ಕಾಶಪ್ಪನವರ್ ಮತ್ತು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ. ಕಾಶಪ್ಪನವರ್ ವಿಡಿಯೋ ಕುರಿತು ಆರೋಪ-ಪ್ರತ್ಯಾರೋಪಗಳು, ಕಮಿಷನ್ ದಂಧೆ, ಮರಳು ಮಾಫಿಯಾ ಹಾಗೂ ಇಳಕಲ್ನಲ್ಲಿನ ಹನಿಟ್ರ್ಯಾಪ್ ದಂಧೆಯ ಬಗ್ಗೆ ಪರಸ್ಪರ ವಾಗ್ದಾಳಿಗಳು ಮುಂದುವರೆದಿವೆ. ಬಾಗಲಕೋಟೆ, ನವೆಂಬರ್ 04: ಸ್ಟಿಂಗ್ ಹಾಗೂ ಹನಿಟ್ರ್ಯಾಪ್ ವಿಚಾರವಾಗಿ ಬಾಗಲಕೋಟೆಯಲ್ಲೂ ಟಾಕ್ ವಾರ್ ಶುರುವಾಗಿದೆ. ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನಡುವೆ ವಾಕ್ಸಮರ ನಡೆದಿದೆ. ವಿಡಿಯೋ ಕಾಲ್ ವಿಚಾರ, ಹನಿಟ್ರ್ಯಾಪ್ ಆರೋಪದ ಬಗ್ಗೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.