ಭಾರತ ಸರ್ಕಾರವು ತನ್ನ ನಾಗರಿಕರಿಗೆ ಅವರ ಉದ್ಯೋಗ, ಹುದ್ದೆ ಮತ್ತು ಪ್ರಯಾಣದ ಉದ್ದೇಶವನ್ನು ಆಧರಿಸಿ ಪ್ರಮುಖವಾಗಿ ನಾಲ್ಕು ವಿಧದ ಪಾಸ್ಪೋರ್ಟ್ಗಳನ್ನು ವಿತರಿಸುತ್ತದೆ. ಅದರಲ್ಲಿ ರಾಜತಾಂತ್ರಿಕ ಪಾಸ್ಪೋರ್ಟ್ (Diplomatic Passport) ಎಂದರೆ ಏನು? ಅದನ್ನು ಯಾರು ಪಡೆಯಬಹುದು? ಇದರ ವಿಶೇಷ ಸೌಲಭ್ಯಗಳು ಹಾಗೂ ಸಿಂಧುತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ದೇಶದ ಗಡಿಯನ್ನು ದಾಟಿ ಮತ್ತೊಂದು ದೇಶಕ್ಕೆ ಹೋಗಲು ಅತ್ಯಗತ್ಯವಾಗಿರುವ ಪಾಸ್ಪೋರ್ಟ್ಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಿಸಲು ಸರ್ಕಾರ ನೀಡುವ ಅತ್ಯಂತ ಅಧಿಕೃತ ಗುರುತಿನ ಚೀಟಿಯಾಗಿವೆ. ಆ ಪೈಕಿ ರಾಜತಾಂತ್ರಿಕ ಪಾಸ್ಪೋರ್ಟ್ ಕೂಡ ಒಂದು.