ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರವಿವಾರ ನಡೆದ ಪ್ರತಿಭಟನೆಯ ವೇಳೆ AISA ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು ಕಿಕ್ಕಿರಿದ... ಪ್ರತಿಭಟನಾಕಾರರನ್ನು ಕಿಕ್ಕಿರಿದ ಕೋಣೆಯಿರುವ ಬಸ್ ಗಳಲ್ಲಿ ಇರಿಸಲಾಗುತ್ತಿದೆ. ಪುರುಷ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ವಶಕ್ಕೆ ಪಡೆಯಲು ಬಳಸುವ ಬಸ್ ನಲ್ಲಿ ನಾಲ್ಕು ಪ್ರತ್ಯೇಕ ಕೋಣೆಗಳಿದ್ದು, ಅವುಗಳ ಒಳಗೆ ಉಸಿರಾಡಲೂ ಜಾಗವಿಲ್ಲ ಎಂದು ಬೋರಾ ಹೇಳಿದ್ದಾರೆ. CRPF ದೇಶದ ಸಾಮಾನ್ಯ ಜನರ ವಿರುದ್ಧ ಯುದ್ಧ ಸಾರುತ್ತಿದೆ. ಕೇವಲ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಇಷ್ಟೊಂದು ಹಿಂಸಾಚಾರವೇಕೆ?