ಗುವಾಹಟಿ: ಯುವ ಬ್ಯಾಟರ್ ಕೆವಿ ಅನೀಶ್ (142*ರನ್, 248 ಎಸೆತ, 10 ಬೌಂಡರಿ, 2 ಸಿಕ್ಸರ್) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಿಡಿಸಿದ ಚೊಚ್ಚಲ ಶತಕದ ಜತೆಗೆ ಎಡಗೈ ಬ್ಯಾಟರ್ ಅನೀಶ್ವರ್ ಗೌತಮ್. ಈ ಮೂಲಕ ನಾಕೌಟ್ಗೇರುವ ಅವಕಾಶ ವೃದ್ಧಿಸಿಕೊಳ್ಳುವ ಕನಸಿಗೆ ಬಲ ಸಿಕ್ಕಿದೆ. ರ್ಬಸಾಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಮಂಗಳವಾರ 2 ವಿಕೆಟ್ಗೆ 180 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ಮತ್ತೆ 316 ರನ್ ಸೇರಿಸಿತು. ಉತ್ತಮ ಲಯದಲ್ಲಿರುವ ಕೆವಿ ಅನೀಶ್ ಹಾಗೂ ಚಿಕ್ಕಮಗಳೂರಿನ ಅನೀಶ್ವರ್ ಗೌತಮ್ ಜೋಡಿ ಐದನೇ ವಿಕೆಟ್ಗೆ 239 ಎಸೆತಗಳಲ್ಲಿ 148 ರನ್ ಸೇರಿಸಿ ಚಹಾ ವಿರಾಮದ ನಂತರ ಬೇರ್ಪಟ್ಟಿತು.