ಬಿಗ್ ಬಾಸ್ ಮನೆಯಲ್ಲಿ ಪತ್ರದ ಟಾಸ್ಕ್ ವೇಳೆ ಸ್ಪರ್ಧಿ ಕಿರಣ್ ಶಾಸ್ತ್ರಿ ಉದ್ದೇಶಪೂರ್ವಕವಾಗಿ ಬಾಲ್ ಕೆಳಗೆ ಬೀಳಿಸಿ ಆಟ ಹಾಳು ಮಾಡಿದ್ದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ನಾಮಿನೇಷನ್ ಸೇಡಿಗೆ ಕೀಳುಮಟ್ಟದ ಆಟವಾಡಿದ ಕಿರಣ್ ಶಾಸ್ತ್ರಿ ಫಿನಾಲೆ ಹಾದಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಕಟುವಾಗಿ ಟೀಕಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಪತ್ರದ ಟಾಸ್ಕ್ ಗಮನ ಸೆಳೆದಿದೆ. ಕಳೆದ ಎರಡು ತಿಂಗಳಿಂದ ಬಿಗ್ ಬಾಸ್ ಮನೆಯಲ್ಲಿ ಸೆರೆಯಾಗಿರುವ ಎಲ್ಲಾ ಸ್ಪರ್ಧಿಗಳಿಗೆ ಮನೆಯಿಂದ ಪತ್ರ ಬಂದಿದೆ. ಆದರೆ ಸ್ಪರ್ಧಿಗಳ ಕೈಗೆ ಸಿಕ್ಕಿರೋದು ಬ್ಲ್ಯಾಂಕ್ ಪತ್ರ. ಇದನ್ನು ಪಡೆಯಬೇಕು ಎಂದು ಕೆಲವು ಸ್ಪರ್ಧೆಗಳನ್ನು ಗೆಲ್ಲಬೇಕು.