IE=edge" http-equiv="X-UA-Compatible">ಗದಗ | ಮಹಾರಾಷ್ಟ್ರದಿಂದ ಗಾಂಜಾ ಪೂರೈಕೆ ಮಾಡುತ್ತಿದ್ದ ನಾಲ್ವರ ಬಂಧನ - 1.17 ಲಕ್ಷ ಮೌಲ್ಯದ ಮಾದಕವಸ್ತು ಜಪ್ತಿ | Public TV - Latest Kannada News, Public TV Kannada Live, Public TV News. ಗದಗ: ಮಹಾರಾಷ್ಟ್ರ (Maharashtra) ರಾಜ್ಯದ ಸೊಲ್ಲಾಪುರದಿಂದ ಗದಗಕ್ಕೆ ಗಾಂಜಾ (Ganja Supply) ಪೂರೈಕೆ ಮಾಡುತ್ತಿದ್ದವರ ಜಾಲ ಪತ್ತೆಯಾಗಿದೆ. ಗದಗ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ನಾಲ್ವರು ಗಾಂಜಾ ಪೆಡ್ಲರ್ಗಳ ಬಂಧನವಾಗಿದೆ. ಪ್ರಕರಣದಲ್ಲಿ ಬಾಷಾಸಾಬ್ ಬುವಾಜಿ (26), ಮಂಜುನಾಥ ಜಾದಾವ್ (33), ಆಕಾಶ ಕಡಕಕೇರ್(23), ರವಿ ಕಡಕಕೇರ್(20) ಎಂಬುವರ ಬಂಧನವಾಗಿದೆ. ಈ ನಾಲ್ವರಲ್ಲಿ ಇಬ್ಬರು ಸ್ಥಳೀಯರು, ಇನ್ನಿಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಮೂಲದವರು.