ಈಗಿನ ಕಾಲದಲ್ಲಿ ಎಷ್ಟು ದುಡಿದ್ರೂ ಕಡಿಮೆಯೇ. ತಿಂಗಳ ಸಂಬಳದಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದೀಗ ಈ ವ್ಯಕ್ತಿಯದ್ದು ಇದೇ ಗೋಳು. ದೆಹಲಿ ಮೂಲದ 34 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸಾಲವನ್ನು ತೀರಿಸಿದ್ದಾರಂತೆ. ಲೋನ್ ಕ್ಲಿಯರ್ ಆದ್ಮೇಲೂ ಯಾವುದೇ ಉಳಿತಾಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಲಕ್ಷ ಲಕ್ಷ ಸಂಬಳ ಬರ್ತಾ ಇದ್ರು ತಿಂಗಳ ಕೊನೆಯಲ್ಲಿ ದುಡ್ಡು ಉಳಿಯಲ್ಲ ಎಂದು ಹೇಳೋದನ್ನು ಕೇಳಿರಬಹುದು. ಆದರೆ ದೆಹಲಿ ವ್ಯಕ್ತಿ ತಿಂಗಳಿಗೆ 80,000 ರೂ ಗಳಿಸುತ್ತಿದ್ರು ಎಐ ಕಾರಣದಿಂದ ಕೆಲಸ (job) ಕಳೆದುಕೊಳ್ಳುವ ಭಯದಲ್ಲಿದ್ದಾರೆ.