Karnataka Rainfall Today: Cyclone Murasu to Bring Heavy Rain Across Karnataka Until November 7; IMD Forecast. ಮುರಸು ಚಂಡಮಾರುತ ತೀವ್ರಗೊಂಡಿರುವುದು ಹಾಗೂ ರಾಜ್ಯದಲ್ಲಿ ಈಶಾನ್ಯ ಮುಂಗಾರು ತೀವ್ರಗೊಂಡಿರುವುದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.ಪಶ್ಚಿಮ - ಮಧ್ಯ ಮತ್ತು ಅದನ್ನು ಹೊಂದಿಕೊಂಡಿರುವ ನೈರುತ್ಯ ಬಂಗಾಳ ಕೊಲ್ಲಿಯ ಮೇಲಿರುವ ತೀವ್ರ ಚಂಡಮಾರುತ ಮುರಸು ಇದೀಗ ಪಶ್ಚಿಮ - ವಾಯುವ್ಯ ದಿಕ್ಕಿನತ್ತ ಚಲಿಸಿದೆ. ಇದು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಸಮೀಪದಲ್ಲಿ ಕೇಂದ್ರೀಕೃತವಾಗಿದೆ. ಇದು ನೆಲ್ಲೂರು (ಆಂಧ್ರಪ್ರದೇಶ) ದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 160 ಕಿ.ಮೀ, ಚೆನ್ನೈ (ತಮಿಳುನಾಡು) ನಿಂದ ಈಶಾನ್ಯಕ್ಕೆ 180 ಕಿ.