ಕಾಸರಗೋಡು: ಶಬರಿಮಲೆ ದೇವಾಲಯದಲ್ಲಿ ಕಳೆದ ತೀರ್ಥಯಾತ್ರೆ ಅವಧಿಯಲ್ಲಿ 8.8 ಲಕ್ಷ ರೂ. ಮೊತ್ತದ ಅರವಣ ಮತ್ತು ಅಪ್ಪ ಪ್ರಸಾದ ನಾಪತ್ತೆ ಆಗಿರುವ ಬಗ್ಗೆ ಶಬರಿಮಲೆ ವಿಶೇಷ ಆಯುಕ್ತ ಆರ್.ಜಯಕೃಷ್ಣನ್ ತಮ. ಶಬರಿಮಲೆ ದೇಗುಲದ ಕೆಲವು ಸಿಬ್ಬಂದಿ ಈ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತಾದ ಸಮಗ್ರ ವರದಿಯನ್ನು ಶಬರಿಮಲೆಯ ವಿಶೇಷ ಆಯುಕ್ತರು ಈಗಾಗಲೇ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ್ದಾರೆ.ಅರವಣ ಪಾಯಸ ದಾಸ್ತಾನು ಮತ್ತು ವಿತರಣೆ ಕುರಿತಾದ ದಾಖಲೆಪತ್ರ ಪರಿಶೀಲನೆ ಸಂದರ್ಭ ಇವೆರಡರ ಮಧ್ಯೆ ಹೊಂದಾಣಿಕೆ ಆಗದಿರುವುದು ಲೋಕಲ್ ಫಂಡ್ ಆಡಿಟ್ ವರದಿಯಲ್ಲಿ ನಮೂದಿಸಲಾಗಿದೆ. ಪ್ರಸಾದ ವಿತರಿಸಿ ಲಭಿಸಬೇಕಾದ ಒಟ್ಟು ಹಣಕ್ಕಿಂತ ಕಡಿಮೆ ಮೊತ್ತವನ್ನು ಸಂಬಂಧಪಟ್ಟ ಪತ್ರಗಳಲ್ಲಿ ನಮೂದಿಸಲಾಗಿದೆ.