ಆನೇಕಲ್ನ ಜಿಗಣಿ ಸಮೀಪದ ಕುಂಬಾರನಹಳ್ಳಿಯ ಗುಜರಿ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಗೋದಾಮಿನಲ್ಲಿದ್ದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಭಸ್ಮವಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೂ ಹೆಚ್ಚಿನ ಪ್ರಮಾಣದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಬೆಂಗಳೂರು, ನವೆಂಬರ್ 3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ಕುಂಬಾರನಹಳ್ಳಿಯಲ್ಲಿರುವ ಗುಜರಿ ಗೋದಾಮಿನಲ್ಲಿ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿ ಹರಡಿದ್ದರಿಂದ ಗೋದಾಮಿನೊಳಗಿದ್ದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿವೆ.