ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಅಮಿತ್ ಶಾ ಮತ್ತು ರಾಹುಲ್ ಗಾಂಧಿ ನಡುವೆ ರಾಜಕೀಯ ಸಮರ ತೀವ್ರಗೊಂಡಿದೆ. 'ವೋಟ್ ಚೋರಿ' ಆರೋಪಿಸಿದ ರಾಹುಲ್, ವಿದೇಶಿ ಶಕ್ತಿಗಳ ಪ್ರಸ್ತಾಪ ಮಾಡಿದ್ದಾರೆ. ಆದರೆ ಶಾ ಎಸ್ಐಆರ್, ಇವಿಎಂ ಹಾಗೂ ಅಕ್ರಮ ವಲಸಿಗರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸವಾಲು ಹಾಕಿದ್ದಾರೆ. ಇದು ಬಿಜೆಪಿ ಮತ್ತು ಇಂಡಿ ಮೈತ್ರಿಕೂಟದ ನಡುವಿನ ಪ್ರಮುಖ ಸಂಘರ್ಷ ಬಿಂದುವಾಗಿದೆ.