ಬಾಲಿವುಡ್ ನಟ ಶಾರುಖ್ ಖಾನ್ ಮುಂಬೈನ ತಮ್ಮ ‘ಮನ್ನತ್’ ನಿವಾಸದ ಎದುರು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 61ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಇದೇ ಶುಭ ಸಂದರ್ಭದಲ್ಲಿ ಶಾರುಖ್ ಖಾನ್ ಹಾಗೂ ಅವರ ಪುತ್ರಿ ಸುಹಾನಾ ಖಾನ್ ನಟನೆಯ ‘ಕಿಂಗ್’ ಸಿನಿಮಾದ ಪ್ರಚಾರ ಕಾರ್ಯಗಳಿಗೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಬಾಲಿವುಡ್ ಬಾಾದ್ಶಾ ಶಾರುಖ್ ಖಾನ್ ತಮ್ಮ 61ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ 2ರಂದು ಮುಂಬೈನ ಅವರ ನಿವಾಸ ‘ಮನ್ನತ್’ ಎದುರು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಶಾರುಖ್ ಖಾನ್ ಕೂಡ ಗ್ಯಾಲರಿಯಲ್ಲಿ ನಿಂತು ಅಭಿಮಾನಿಗಳಿಗೆ ಕೈಬೀಸಿದರು. ತಮ್ಮ ಐಕಾನಿಕ್ ಪೋಸ್ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.