ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಿದೆ. ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರದ್ದಾಗಿದೆ. ಮತ್ತೊಂದೆಡೆ, ದೀಪಾವಳಿಗೆ ಬೆಂಗಳೂರಿನಿಂದ ತಿರುವನಂತಪುರಂಗೆ ವಿಶೇಷ ರೈಲು ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ - ತಿರುವನಂತಪುರ ಸ್ಪೆಷಲ್ ಟ್ರೇನ್ನ ವೇಳಾಪಟ್ಟಿ ಹಾಗೂ ವಿವರಗಳು ಇಲ್ಲಿವೆ. ಬೆಂಗಳೂರು, ನವೆಂಬರ್ 3: ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಇದರ ಜೊತೆಗೆ, ಎಸ್ಎಂವಿಟಿ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮತ್ತೊಂದೆಡೆ, ದೀಪಾವಳಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್ನಿಂದ ಕೇರಳದ ತಿರುವನಂತಪುರಂ ನಾರ್ತ್ಗೆ ವಿಶೇಷ ರೈಲು ಸಂಚರಿಸಲಿದೆ.