ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗವಿಪಿ ಬಡಾವಣೆಯಲ್ಲಿರುವ ರಾಷ್ಟಿçÃಯ ನಾಯಕ, ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪ ಅವರು ವಾಸವಿದ್ದ ನಿವಾಸ ವಿನಯದ ನವೀಕರಣ ಕಾಮಗಾರಿ ಇನ್ನು ೨೦-೩೦ ದಿನದೊಳಗೆ. ಆದರೆ ಈ ಮನೆಯನ್ನು ನಿಜಲಿಂಗಪ್ಪ ಅವರ ಕುಟುಂಬ ವರ್ಗದವರಿಂದ ಖರೀದಿಸಲು ಸರ್ಕಾರ ಬಿಡುಗಡೆ ಮಾಡಿದ್ದ ೫ ಕೋಟಿ ರೂ.ಅನುದಾನದಲ್ಲೇ ಉಳಿದ ಮೊತ್ತ ೮೩ ಲಕ್ಷ ರೂ.ಗಳಲ್ಲಿ ನವೀಕರಣ ಕಾಮಗಾರಿಯನ್ನು ಕಳೆದ ಜನವರಿಯಿಂದ ಕೈಗೆತ್ತಿಕೊಳ್ಳಲಾಗಿದೆ.ಈ ಪಾರಂಪರಿಕ ಕಟ್ಟಡದ ಮೂಲ ರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ ನವೀಕರಣ ಕಾರ್ಯ ನಡೆಸಲಾಗಿದೆ.