Flying Hoverboard: ಹಾಲಿವುಡ್ನ ಆ್ಯಕ್ಷನ್ ಅಥವಾ ಸೈನ್ಸ್ ಫಿಕ್ಷನ್ (ಸೈಫೈ) ಸಿನಿಮಾಗಳಲ್ಲಿ ತೋರಿಸುವ ಕಾಲ್ಪನಿಕ ದೃಶ್ಯಗಳಂತೆ ಇಲ್ಲೊಂದು ನೈಜ ಘಟನೆಯೂ ಅನೇಕರ ಹುಬ್ಬೇರಿಸಿದ್ದು, ನಿಜಕ್ಕೂ. ಅಸಲಿಗೆ, ಹೋವರ್ಬೋರ್ಡ್ನಲ್ಲಿ ಯುವಕನೊಬ್ಬ ಪರ್ವತ, ನದಿಗಳ ಮಧ್ಯೆ ಹಾರುತ್ತಿರುವ ದೃಶ್ಯ ಸತ್ಯವೇ. ಬೆಟ್ಟ-ಗುಡ್ಡಗಳು, ನದಿಗಳು, ಪರ್ವತ ಶ್ರೇಣಿಗಳ ನಡುವೆ ಒಂದು ಹೋವರ್ಬೋರ್ಡ್ ಮೂಲಕ ಹಾರಾಡುತ್ತಿರುವ ಈ ಯುವಕನ ಹೆಸರು ಸಾಂಗ್ ಕ್ಸಿಂಗ್ಯು (26). ಮೂಲತಃ ಚೀನಾದ ಹುಬೈ ಭಾಗದ ನಿವಾಸಿಯಾಗಿರುವ ಈತ ಖುದ್ದಾಗಿ ತಾನೇ ಅಭಿವೃದ್ಧಿಪಡಿಸಿದ ಹಾರುವ ಸಾಧನವನ್ನು ಯಶಸ್ವಿಯಾಗಿ ಪರೀಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ..ಈ ವಿಡಿಯೋ ಅ.15ರಂದು ಹಂಚಿಕೊಳ್ಳಲಾಗಿದ್ದು, ಯುವಕ ಯಶಸ್ವಿ ಪ್ರಯೋಗವನ್ನು ತೋರಿಸಿದೆ.