ವಿಜಯನಗರಂ: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಮಿಗಿಲಾದ ಬಂಧುವಿಲ್ಲ ಎಂಬ ಮಾತಿದೆ. ಮಗುವಿನ ಪ್ರಾಣಕ್ಕೆ ಆಪತ್ತು ಎದುರಾದಾಗ ತಾಯಿ ಯಾವ ಹಂತಕ್ಕೂ ಹೋಗಬಲ್ಲಳು ಎಂಬುದಕ್ಕೆ ಆಂಧ್ರಪ್ರದೇಶದಲ್ಲಿ ನಡೆ. ಅನಾರೋಗ್ಯದಿಂದ ನರಳುತ್ತಿದ್ದ 12 ವರ್ಷದ ಮಗಳನ್ನು ಉಳಿಸಿಕೊಳ್ಳಲು, ಆಸ್ಪತ್ರೆಗೆ ಕೊಂಡೊಯ್ಯಲು ಯಾವುದೇ ವಾಹನ ಸಿಗದೆ ಕಂಗಾಲಾದ ತಾಯಿಯೊಬ್ಬಳು, ಕೊನೆಗೆ ಮಗಳನ್ನು ತನ್ನ ಹೆಗಲ ಮೇಲೆಯೇ ಹೊತ್ತುಕೊಂಡು ಬರೋಬ್ಬರಿ 7 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ ಘಟನೆ ಈಗ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ. .ಏನಿದು ಘಟನೆ?ಈ ಘಟನೆಯು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿರುವ ಬುಡಕಟ್ಟು ಗ್ರಾಮ ಪಲ್ಲಪು ದುಂಗಡದಲ್ಲಿ ವರದಿಯಾಗಿದೆ.