ಬೆಂಗಳೂರು: ‘ಕಾಂತಾರ’ ಸರಣಿ ಬಳಿಕ ನಟ ರಿಷಬ್ ಶೆಟ್ಟಿ ತೆಲುಗಿನ ‘ಜೈ ಹನುಮಾನ್’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಅದರ ಮಧ್ಯೆಯೇ, ಅವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ. ಅದರ ಮಧ್ಯೆಯೇ, ಅವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್ ಭಾರತ್’ ಸಿನಿಮಾವನ್ನು ಒಪ್ಪಿಕೊಂಡಿದ್ದರು. ‘ಸೇದ್’ ಖ್ಯಾತಿಯ ಸಂದೀಪ್ ಸಿಂಗ್ ಈ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಇನ್ನು ಮುಗಿಯದ ಕಾರಣ ಸೆಟ್ಟೇರಲು ತಡವಾಗಿದೆ. ಸದ್ಯ ಸಿನಿಮಾ ಕಾರ್ಯಗಳು ನಡೆಯುತ್ತಿದ್ದು, ಆ ಮಧ್ಯೆಯೇ ಚಿತ್ರದ ಬಗ್ಗೆ ಮತ್ತೊಂದು ಅಪ್ಡೇಟ್ ದೊರೆತಿದೆ.