ಭಾರತೀಯ ಷೇರು ಮಾರುಕಟ್ಟೆಗೆ ಚೇತರಿಕೆ ನೀಡುವ ಉದ್ದೇಶದಿಂದ ಸೆಬಿ ಕೆಲ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ವಿದೇಶಿ ಹೂಡಿಕೆದಾರರಿಗೆ ದೀರ್ಘಕಾಲೀನ ಬಂಡವಾಳ ಲಾಭ ತೆರಿಗೆಯನ್ನು (LTCG) ತೆಗೆದುಹಾಕಬಹುದು ಎಂದು ಸರ್ಕಾರಕ್ಕೆ ಸೆಬಿ ಶಿಫಾರಸು ಮಾಡಿದೆ. ದೇಶೀಯ ಮ್ಯೂಚುವಲ್ ಫಂಡ್ಗಳಿಗೂ ತೆರಿಗೆ ರಿಯಾಯಿತಿ ಒದಗಿಸಲು ಸೆಬಿ ಪ್ರಸ್ತಾಪಿಸಿದೆ. ನವದೆಹಲಿ, ನವೆಂಬರ್ 2: ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಮತ್ತು ಜಾಗತಿಕ ಮಾರುಕಟ್ಟೆಯೊಂದಿಗೆ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಮಹತ್ವದ ಪ್ಲಾನ್ ಮಾಡಿದೆ. ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರಿಗೆ (FPI) ವಿಧಿಸಲಾಗುವ ದೀರ್ಘಕಾಲೀನ ಬಂಡವಾಳ ಲಾಭ ತೆರಿಗೆಯನ್ನು (LTCG) ತೆಗೆದುಹಾಕುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.