ಭಾರತದ ಟುಕು ಟುಕು ರಿಕ್ಷಾ ವಿದೇಶಕ್ಕೆ ಹೇಗೆ ಹೋಯ್ತು ಎಂದೆನಿಸಬಹುದು. ಇದರ ಹಿಂದಿದೆ ಬ್ರಿಟನ್ ದಂಪತಿಯ ನಂಟು. ಭಾರತದ ಪ್ರವಾಸದ ಸವಿನೆನಪಿಗಾಗಿ ಆಟೋ ರಿಕ್ಷಾವನ್ನೇ ತಮ್ಮ ದೇಶಕ್ಕೆ ಕೊಂಡೊಯ್ದಿದ್ದಾರೆ. ಪ್ರವಾಸದ ವೇಳೆ ಈ ಆಟೋ ರಿಕ್ಷಾದ ಮೂಲಕ ಸಂಚರಿಸಿದ್ದು, ಇದೀಗ ಯುಕೆ ತಲುಪಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಭಾರತಕ್ಕೆ ಬರುವ ವಿದೇಶಿಗರು (foreigners) ಇಲ್ಲಿನ ಪ್ರವಾಸಿ ತಾಣಗಳನ್ನು ಎಂಜಾಯ್ ಮಾಡುತ್ತಾರೆ. ಅದರ ಜತೆಗೆ ತಮಗೆ ಇಷ್ಟವಾದ ಯಾವುದಾದರೂ ವಸ್ತುವನ್ನು ತೆಗೆದುಕೊಂಡು ಹೋಗ್ತಾರೆ. ಆದರೆ ಈ ವಿದೇಶಿ ದಂಪತಿ ಮಾಡಿದ ಕೆಲಸ ನೋಡಿದ್ರೆ ನೀವು ಅಚ್ಚರಿ ಪಡ್ತೀರಾ.