ಬೆಂಗಳೂರು: ಕರ್ನಾಟಕ ರಾಜ್ಯ ರಚನೆಯಾದ ದಿನ ಇಂದು. ನವೆಂಬರ್ 1 ಕನ್ನಡಿಗರ ಪಾಲಿಗೆ ಅತ್ಯಂತ ಸಂಭ್ರಮದ ದಿನ. ರಾಜ್ಯಾದ್ಯಂತ ಇಂದು 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮ ಮನೆ ಮಾಡಿದೆ.ಗಡಿ ನಾಡ. ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರ ಜಮಾಯಿಸಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ವೈಭವದ ರಾಜ್ಯೋತ್ಸವವನ್ನು ಆಚರಿಸಿದರು. ಕೆಂಪು-ಹಳದಿ ಬಣ್ಣದ ಬಲೂನ್ಗಳ ಗುಚ್ಚ ಆಕಾಶಕ್ಕೆ ತೇಲಿ ಬಿಟ್ಟು ಸಂಭ್ರಮಿಸಿದರು..ಮೈಸೂರು ರಾಜ್ಯದಿಂದ ಕರ್ನಾಟಕಕರ್ನಾಟಕ ರಾಜ್ಯೋತ್ಸವವು 1956 ಕ್ಕೆ ಆರಂಭವಾಯಿತು. ರಾಜ್ಯಗಳ ಮರುಸಂಘಟನೆ ಕಾಯ್ದೆಯನ್ನು ಭಾರತದಾದ್ಯಂತ ಜಾರಿಗೆ ತಂದಾಗ. ಭಾಷಾ ಮತ್ತು ಸಾಂಸ್ಕೃತಿಕ ಸಾಮ್ಯತೆಗಳ ಆಧಾರದ ಮೇಲೆ ರಾಜ್ಯಗಳ ಗಡಿಗಳನ್ನು ಮರುಸಂಘಟಿಸುವಲ್ಲಿ ಈ ಕಾಯಿದೆ ನಿರ್ಣಾಯಕವಾಗಿತ್ತು.