ನವದೆಹಲಿ: ಹಾಲಿ ವರ್ಷ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಷಿಪ್ನಿಂದಾಗಿ ಪ್ರೊ ಕಬಡ್ಡಿ ಲೀಗ್ ವಿಳಂಬಗೊಂಡಿದೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ, ಹಾಲಿ ವರ್ಷ ಪ್ರೊ. ಆದರೆ ಇದೀಗ, ಹಾಲಿ ವರ್ಷ ಪ್ರೊ ಕಬಡ್ಡಿ ಲೀಗ್ ಟೂರ್ನಿಯೇ ನಡೆಯುವುದಿಲ್ಲ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಟೂರ್ನಿಯ ನೇರಪ್ರಸಾರ ಹಕ್ಕು ಸಮಸ್ಯೆಯಿಂದಾಗಿ ಹಾಲಿ ವರ್ಷದ ಟೂರ್ನಿ ಮುಂದೂಡಿಕೆಯಾಗಿದೆ ಎಂದು ವರದಿಯಾಗಿದೆ. ಜಿಯೋಸ್ಟಾರ್ (ಹಿಂದಿನ ಸ್ಟಾರ್ ಇಂಡಿಯಾ) ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪ್ರಸಾರ ಹಕ್ಕು ಹೊಂದಿತ್ತು ಮತ್ತು ಕಳೆದ ವರ್ಷ ಇದರ ಅವಧಿ ಕೊನೆಗೊಂಡಿತ್ತು. 2021ರಲ್ಲಿ ಟೂರ್ನಿಯ 5 ವರ್ಷಗಳ ಪ್ರಸಾರ ಹಕ್ಕು 905 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು.