ಕಾಸರಗೋಡು: ಸಮಾಜದ ಕಲ್ಮಶಗಳನ್ನು ತೊಡೆದು ಹಾಕುವುದರ ಜತೆಗೆ ನಿರಕ್ಷರಿಗಳನ್ನೂ ಬೌದ್ಧಿಕ ವಿಕಾಸದತ್ತ ಕೊಂಡೊಯ್ಯುವ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಮಾಧ್ಯಮವಾಗಿದೆ. ಅಂತರಂಗವನ್ನು ಶುದ್ಧಗೊಳಿಸುವ ಕಲ. ಅಂತರಂಗವನ್ನು ಶುದ್ಧಗೊಳಿಸುವ ಕಲೆಗಳ ಸಾಲಿನಲ್ಲಿ ಗಂಡುಮೆಟ್ಟಿನ ಕಲೆ ಯಕ್ಷಗಾನ ಮುಂಚೂಣಿಯಲ್ಲಿದೆ ಎಂದು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೂಡ್ಲು ಸುಬ್ರಾಯ ಶ್ಯಾನುಭಾಗ್ ವೇದಿಕೆಯಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವ ’ರಜತರಂಗ’ದ ಸಮಾರೋಪ ಸವಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ರಜತರಂಗ ಸಮಿತಿ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.