ಕಡಬ: ಗುತ್ತಿಗೆ ಆಧಾರದಲ್ಲಿ ಕಡಬ ಪಟ್ಟಣ ಪಂಚಾಯಿತಿಗೆ ನೇಮಕಗೊಂಡಿದ್ದ ಸಿಬ್ಬಂದಿಯ ಕಡತ ಕಾಣೆಯಾಗಿರುವ ವಿಚಾರದ ಕುರಿತು ಶನಿವಾರ ಕಡಬ ಪಪಂ ಸಭಾಂಗಣದಲ್ಲಿ ಅಧ್ಯಕ್ಷೆ ತಮನ್ನಾ ಜಬೀನ್ ಅಧ್ಯಕ್ಷತೆಯಲ್ಲ. 3 ತಿಂಗಳ ಹಿಂದೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಅವರಿಗೆ ಈ ತನಕ ಯಾವುದೇ ಸಂಬಳ ನೀಡಿಲ್ಲ ಯಾಕೆ ಎಂದು ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಹನೀಫ್ ಪ್ರಶ್ನಿಸಿದರು. ಈ ಸಂದರ್ಭ ಸಿಬ್ಬಂದಿಗೆ ಸಂಬಂಧಪಟ್ಟ ಕಡತವೇ ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂತು. ಮಾತನಾಡಿ, ಕಡಬ ಪಪಂಯಲ್ಲಿ ನಡೆಯುವ ಗೊಂದಲಕ್ಕೆ ತೆರೆ ಎಳೆಯಬೇಕಾದರೆ ಮುಖ್ಯಾಧಿಕಾರಿ ಮೊದಲು ಸರಿಯಾಗಬೇಕು. ಒಂದು ವಾರದೊಳಗೆ ಸಿಬ್ಬಂದಿಗೆ ಸಂಬಳ ನೀಡುವ ಕೆಲಸ ಆಗಬೇಕು ಎಂದರು.