ಮೈ ಹೋಮ್ ಗ್ರೂಪ್, ನಿರ್ಮಾಣ ಕ್ಷೇತ್ರದ ದೈತ್ಯ ಸಂಸ್ಥೆಯಾಗಿದ್ದು, ಬೆಂಗಳೂರಿನಲ್ಲಿ ತನ್ನ ನೂತನ ಕಚೇರಿಯನ್ನು ಉದ್ಘಾಟಿಸಿದೆ. ಉಪಾಧ್ಯಕ್ಷ ಜೂಪಲ್ಲಿ ರಾಮುರಾವ್ ಅವರು ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟಿವಿ9 ನೆಟ್ವರ್ಕ್ನ ಸಿಒಒ ವಿಕ್ರಂ ಕೆ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದರು. ಬೆಂಗಳೂರು, ನವೆಂಬರ್ 1: ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಉದ್ಯಮ ಸಮೂಹ ಹಾಗೂ ನಿರ್ಮಾಣ ಕ್ಷೇತ್ರದ ದೈತ್ಯ ‘ಮೈ ಹೋಮ್ ಗ್ರೂಪ್’ ತನ್ನ ನೂತನ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ಭಾನುವಾರ ಲೋಕಾರ್ಪಣೆಯಾಯಿತು. ಈ ಕಾರ್ಯಕ್ರಮವು ಸಂಸ್ಥೆಯ ಬೆಳವಣಿಗೆ ಮತ್ತು ಬೆಂಗಳೂರಿನಲ್ಲಿ ಅದರ ಉಪಸ್ಥಿತಿಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.