ಬೆಂಗಳೂರು: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಜಯನಗರದ 2ನೇ ಬ್ಲಾಕ್ನ ಅಶೋಕ ಪಿಲ್ಲರ್ ಬಳಿಯ ಚಂದ್ರಸಾಗರ ಕಲ್ಯಾಣ ಮಹಲ್ನಲ್ಲಿ ಆಯೋಜಿಸಿರುವ ಎರಡು ದಿನಗಳ ‘ಪ್ರಾಪರ್ಟಿ ಎಕ್ಸ್ಪೋ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧ್ಯಕ್ಷ ಎನ್.ಎ.ಹ್ಯಾರಿಸ್, ಎಕ್ಸ್ ಪೋಗೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಗ್ರಾಹಕರು ಕುಟುಂಬ ಸಮೇತ ಆಗಮಿಸಿ ಪ್ರತಿ ಸ್ಟಾಲ್ಗಳಲ್ಲಿ ಸೂರು ಹೊಂದಲು ಬೇಕಾದ ನಿವೇಶನಗಳು, ಅಪಾರ್ಟ್ವೆುಂಟ್, ಫಾಮರ್್ಲ್ಯಾಂಡ್ ಮತ್ತು ವಿಲ್ಲಾ ಸೇರಿ ಇತರ ಸ್ಥಿರಸ್ತಿಗಳ ಬಗ್ಗೆ ವಿವರ ಕಲೆಹಾಕಿದರು. ಕಂಪನಿಯ ನಿವೇಶನಗಳು ಮತ್ತು ಸೌಲಭ್ಯಗಳು ಇಷ್ಟವಾಗುತ್ತಲೇ ಪರಿಶೀಲನೆ ನಡೆಸಲು ಸ್ಥಳದಲ್ಲೇ ನಿವೇಶನಗಳ ಬುಕ್ಕಿಂಗ್ ಕೂಡ ಮಾಡಿದರು.