ಎಲ್ ನಿನೊ ಪ್ರಭಾವದಿಂದಾಗಿ ಈ ಬಾರಿಯ ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಚಳಿಯ ಬದಲು ಬೆಚ್ಚಗಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಾಪಮಾನ ಏರಿಕೆಯ ಜೊತೆಗೆ ಮಳೆಯ ಪ್ರಮಾಣದಲ್ಲೂ ಭಾರಿ ಕೊರತೆಯಾಗಲಿದ್ದು, ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಇನ್ನು ಕರ್ನಾಟಕದಲ್ಲಿ ಇಂದಿನ ಹವಾಮಾನ ವರದಿ ಏನು ಹೇಳುತ್ತೆ ಎನ್ನುವುದು ಈ ಕೆಳಗಿನಂತಿದೆ. ಬೆಂಗಳೂರು, (ನವೆಂಬರ್ 01): ರಾಜ್ಯದ ಹಲವೆಡೆ ಇಂದಿನಿಂದ ಒಂದು ವಾರಗಳ ಕಾಲ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ.