ಹಬ್ಬದ ಹೊತ್ತಲ್ಲೇ ರಾಜ್ಯದ ಜನತೆಗೆ ಸರ್ಕಾರ ದರ ಸಿಡಿಲನ್ನೇ ಬಡಿಸಿದೆ. ರೈತರ ಉದ್ಧಾರದ ಹೆಸರಿನಲ್ಲಿ ಸಾಮಾನ್ಯರ ಜೇಬಿಗೆ ಭರ್ಜರಿ ಕತ್ತರಿ ಹಾಕ್ತಿದೆ. ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಗಗನಕ್ಕೇರಲಿದೆ. ಹಾಲಿನ ಬೆಲೆ ಕೇಳಿ ಕಂಗಾಲಾದ ಜನರು ಈಗ ಮೊಸರಿನ ರೇಟ್ ಕೇಳಿ ರೊಚ್ಚಿಗೆದ್ದಿದ್ದಾರೆ. ಹಾಗಾದ್ರೆ, ಯಾವ ಹಾಲಿನ ಪ್ಯಾಕೇಟ್ ದರ ಎಷ್ಟು ಹೆಚ್ಚಾಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ. ಬೆಂಗಳೂರು, (ನವೆಂಬರ್ 1): ದುಬಾರಿ ದುನಿಯಾದಲ್ಲಿ ಬಡವರು-ಮಧ್ಯಮ ವರ್ಗದವರು ಬದುಕೋದೇ ಕಷ್ಟ ಕಷ್ಟ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಅಕ್ಕಿ, ಜೋಳ ಸೇರಿದಂತೆ ಇತರೆ ಇತರೆ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ.