ಫಹಾದ್ ಫಾಸಿಲ್ ನಟನೆಯ 2024ರ ಬ್ಲಾಕ್ಬಸ್ಟರ್ ‘ಆವೇಶಂ’ ಚಿತ್ರದ ನಂತರ ಜಿತು ಮಾಧವನ್ ನಿರ್ದೇಶಿಸಿರುವ ‘ಸೀನ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ರೊಮ್ಯಾನ್ಸ್, ಆ್ಯಕ್ಷನ್, ಥ್ರಿಲ್ಲರ್ ಹಾಗೂ ಹಾಸ್ಯದ ಮಿಶ್ರಣ ಹೊಂದಿರುವ ‘ಸೀನ್’ ಸಿನಿಮಾ ನವೆಂಬರ್ 6ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಕಾಲಿವುಡ್ ನಟ ಸೂರ್ಯ ಅವರ ಅಭಿಮಾನಿಗಳಿಗೆ ಈ ವರ್ಷ ಸಂಭ್ರಮವೋ ಸಂಭ್ರಮ. ಈಗಾಗಲೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ‘ಕರುಪ್ಪು’ ಹಾಗೂ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾಗಳ ಭರ್ಜರಿ ಯಶಸ್ಸಿನ ನಂತರ, ಸೂರ್ಯ ಅವರ ಈ ವರ್ಷದ ಮೂರನೇ ಚಿತ್ರ ‘ಸೀನ್’ ಬಿಡುಗಡೆಗೆ ಸಿದ್ಧವಾಗಿದೆ.