ಶ್ರೀಶೈಲ : ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನವೆಂಬರ್ ತಿಂಗಳ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿಯು ಈ ಕೆಳಗಿನಂತೆ ನಿಗದಿಯಾಗಿದೆ.ನ.1 ಹಾಗೂ. ಅಂದು ಸಂಜೆ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ನೂತನ ಬಡಾವಣೆ ಉದ್ಘಾಟನೆ ನೆರವೇರಿಸುವರು. ನ.4ಕ್ಕೆ ಕುಷ್ಟಗಿ ತಾಲೂಕಿನ ಚಳಗೇರಿ ಹಿರೇಮಠದ ನೂತನ ರಥೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ನ.5 ರಿಂದ 7ರವರೆಗೆ ಶ್ರೀಶೈಲದಲ್ಲಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮತ್ತು ಸಮಾಲೋಚನಾ ಸಭೆ. ನ.9 ರಂದು ಚಿಕ್ಕೋಡಿ ತಾಲೂಕಿನ ಯಡೂರದಲ್ಲಿ ಅಮಾವಾಸ್ಯೆಯ ಪ್ರಯುಕ್ತ ಶ್ರೀವೀರಭದ್ರಸ್ವಾಮಿಗೆ ವಿಶೇಷ ಪೂಜೆ ಹಾಗೂ ಭಕ್ತರಿಗೆ ದರ್ಶನ ನೀಡಲಿದ್ದಾರೆ. ನ.11 ಕ್ಕೆ ಸಾಗರ ತಾಲೂಕಿನ ವೀರಾಪುರ ಹಿರೇಮಠದ ನೂತನ ಶಿಲಾಮಠದ ಲೋಕಾರ್ಪಣೆ ನೆರವೇರಿಸುವರು. ನ.