ಪ್ರಶಾಂತ ರಿಪ್ಪನ್ಪೇಟೆ ಬೆಂಗಳೂರು : ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ನಗರದ ಸಂಚಾರ ಸಿಗ್ನಲ್ಗಳಲ್ಲಿರುವ ಡಿಜಿಟಲ್ ಡಿಸ್ಪ್ಲೇ ಪರದೆಗಳಲ್ಲಿ ಕನ್ನಡದ ಕೆಂಪುಹಳದ. ಅಲ್ಪ ಸಮಯವಾದರೂ ಜನರ ಗಮನ ಕೇಂದ್ರೀಕರಿಸುವ ಮೂಲಕ ರಾಜ್ಯೋತ್ಸವದ ನೆನಪು ಮತ್ತು ಮಹತ್ವವನ್ನು ಸಾರುವಲ್ಲಿ ಈ ಪ್ರಯತ್ನ ಗಮನಾರ್ಹವಾಗಿದೆ.ಸಂಚಾರ ನಿರ್ವಹಣೆಯಲ್ಲಿ ತಂತ್ರಜ್ಞಾನವನ್ನು ಬಳಸುತ್ತಿರುವ ಬೆಂಗಳೂರು ಸಂಚಾರ ಪೊಲೀಸರು, ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸಲು ಡಿಜಿಟಲ್ ಪ್ರದರ್ಶನ ವ್ಯವಸ್ಥೆಯನ್ನೂ ಬಳಸುವುದು ಸಾಮಾನ್ಯ. ಜೊತೆಗೆ ಸಂಚಾರ ಸಿಗ್ನಲ್ಗಳ ಕೌಂಟ್ಡೌನ್ ಪರದೆಗಳನ್ನು ವಿಶೇಷ ಸಂದರ್ಭಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ.