ಕೆಸ್ಟ್ಚರ್ಚ್: ಭರ್ಜರಿ ಫಾರ್ಮ್ ಮುಂದುವರಿಸಿರುವ ಕನ್ನಡಿಗ ದೇವದತ್ ಪಡಿಕ್ಕಲ್ (80 ರನ್, 140 ಎಸೆತ, 12 ಬೌಂಡರಿ) ಮತ್ತು ಶತಕದಂಚಿನಲ್ಲಿರುವ ನಾಯಕ ಧ್ರುವ ಜುರೆಲ್ (99*ರನ್, 155 ಎಸೆತ. ನಂತರ ಪಡಿಕ್ಕಲ್, ಜುರೆಲ್ ಸಹಿತ ಬ್ಯಾಟರ್ಗಳ ಉಪಯುಕ್ತ ಕೊಡುಗೆಯಿಂದ ದಿನದಂತ್ಯಕ್ಕೆ 88 ಓವರ್ಗಳಲ್ಲಿ 7 ವಿಕೆಟ್ಗೆ 291 ರನ್ ಕಲೆಹಾಕಿದೆ. ಶತಕದಿಂದ ಕೇವಲ 1 ರನ್ ದೂರವಿರುವ ಜುರೆಲ್ ಜತೆಗೆ ಆಕಾಶ್ದೀಪ್ (25*) ಕ್ರೀಸ್ನಲ್ಲಿದ್ದಾರೆ. ಇವರಿಬ್ಬರು ಮುರಿಯದ 8ನೇ ವಿಕೆಟ್ಗೆ 112 ಎಸೆತಗಳಲ್ಲಿ 69 ರನ್ ಕಲೆಹಾಕಿದ್ದಾರೆ.