ನವದೆಹಲಿ: ದೆಹಲಿ ಕರ್ನಾಟಕ ಸಂಘವು ಪ್ರತಿ ವರ್ಷ ರಂಗಭೂಮಿ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ‘ಕನ್ನಡ ಭಾರತೀ ರಂಗ ಪ್ರಶಸ್ತಿ’ಯನ್ನು 2026ನೇ ಸ. ದತ್ತಾತ್ರೇಯ (ದತ್ತಣ್ಣ) ಅವರಿಗೆ ನೀಡಲು ಸಂಘದ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದೆ.ದೆಹಲಿ ಕರ್ನಾಟಕ ಸಂಘದ ಕನ್ನಡ ಭಾರತೀ ರಂಗ ಪ್ರಶಸ್ತಿರಂಗಭೂಮಿ ಕ್ಷೇತ್ರದಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸಿದವರನ್ನು ಗುರುತಿಸಿ ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದೆ. 2015ರಲ್ಲಿ ಮೊದಲ ಪ್ರಶಸ್ತಿಯನ್ನು ‘ಕನ್ನಡ ಭಾರತಿ’ಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ರಂಗಕರ್ಮಿ ಎಂ.ವಿ. ನಾರಾಯಣರಾವ್, 2016ರಲ್ಲಿ ಶ್ರೀಮತಿ ಸರೋಜಿನಿ ಶೆಟ್ಟಿ, 2017ರಲ್ಲಿ ಶ್ರೀ ಸುರೇಶ್ ಆನಗಳ್ಳಿ, 2021ರಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, 2022ರಲ್ಲಿ ಶ್ರೀ ಶ್ರೀನಿವಾಸ ಜಿ.